Narsha Kshetra Experience

Shri Moola Rama Devara Puje

At Narsha

ನಯನ ಮನೋಹರ ತಾಣ.ಹೆಸರು ನರ್ಷ. ಚಿಕ್ಕ, ಸುಂದರ ತಟಾಕ. ಪುರಾತನ ದೇವಾಲಯ. ಅಲ್ಲಿ ಪುಟ್ಟ ನರಸಿಂಹ. ಯೋಗದ ಭಂಗಿಯಲ್ಲಿ ವಿರಾಜಮಾನ.  ನರಸಿಂಹನ ಪಕ್ಕದ ಪೋಳಿಯಲ್ಲಿ ದೊಡ್ಡ ಮಂಟಪ. ಮಂಟಪದಲ್ಲಿ ಮೂಲರಾಮ, ದಿಗ್ವಿಜಯರಾಮ. ಅರ್ಚಿಸುತ್ತಿರುವವರು ಶ್ರೀ ಉತ್ತರಾಧಿಮಠಾಧೀಶರಾದ ಶ್ರೀ ಶ್ರೀ ಸತ್ಯಾತ್ಮತೀರ್ಥರು. ಪಕ್ಕದಲ್ಲೇ ಇನ್ನೊಂದು ಮಂಟಪ. ಆ ಮಂಟಪದಲ್ಲಿ ಯೋಗನರಸಿಂಹ , ಕರಾಳ ನರಸಿಂಹ ದೇವರ ಉಪಸ್ಥಿತಿ

Shri Moola Rama Devara Puje

At Udupi

ಉಡುಪಿ. ಕಡಗೋಲು ಬಾಲ ಕೃಷ್ಣ. ಚಂದ್ರಶಾಲೆ. ಮುಖ್ಯಪ್ರಾಣದೇವರ ಸನ್ನಿಧಾನ. ಪಕ್ಕದಲ್ಲಿ ಸುಂದರ ಮಂಟಪ. ಮಂಟಪದಲ್ಲಿ ಮೂಲರಾಮ, ದಿಗ್ವಿಜಯರಾಮ ದೇವರು. ಅರ್ಚಿಸುತ್ತಿರುವವರು ಶ್ರೀ ಉತ್ತರಾಧಿಮಠಾಧೀಶರಾದ ಶ್ರೀ ಶ್ರೀ ಸತ್ಯಾತ್ಮತೀರ್ಥರು. ಶ್ರೀ ಕೃಷ್ಣನ ಎದುರಲ್ಲಿ ಇನ್ನೊಂದು ರೂಪದಿಂದ ಮೂಲರಾಮ-ಮೂಲ ಸೀತಾದೇವಿ. ಮತ್ತೊಂದು ರೂಪದಲ್ಲಿ ದಿಗ್ವಿಜಯರಾಮ.

Sabha

At Narsha

ಆಮೇಲೆ ನಡೆದದ್ದು ಐತಿಹಾಸಿಕ ಸಭೆ. ಇಲ್ಲಿ ಮೂರು ಸ್ವಾಮಿಗಳು, ಪಂಡಿತರು, ದಾನಿಗಳು, ಶಿಷ್ಯರು, ಭಕ್ತರ ಸಮಾಗಮ.. ಪ್ರಸ್ತುತ ಈ ಕ್ಷೇತ್ರವನ್ನು ಆಡಳಿತ ಮಂಡಳಿಯ ಬಳ್ಳಕ್ಕುರಾಯ ಕುಟುಂಬದವರು ಶ್ರೀಹರಿ ಪ್ರೇರಣೆಯಂತೆ ನಾರ್ಶ್ಯಕ್ಷೇತ್ರವನ್ನು ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀಮದುತ್ತರಾದಿಮಠಕ್ಕೆ ಸಮರ್ಪಿಸಿದ್ದಾರೆ. ಅದಕ್ಕಾಗಿ ಅವರ ಸತ್ಕಾರ, ಆಶೀರ್ವಾದಗಳು ಜರುಗಿದವು..