ವಸ್ತುವಿನ ಯಾಂತ್ರಿಕ ಚಲನೆಯನ್ನು ಆಧರಿಸಿ ನ್ಯೂಟನ್ ಮೂರು ನಿಯಮಗಳನ್ನು ರಚಿಸಿದ್ದಾರೆ
‘ವಸ್ತುವೊಂದು, ಹೊರಗಿನ ಬಲ ಇಲ್ಲದಿದ್ದರೆ, ತನ್ನ ಚಲನ ಸ್ಥಿತಿಯಲ್ಲೆ ಮುಂದುವರೆಯುತ್ತದೆ’
ಉದಾಹರಣೆ: ನೀವು ಬಸ್‌ನಲ್ಲಿ ಚಲಿಸುವಾಗ, ನೀವು ವಿಶ್ರಾಂತಿ ಸ್ಥಿತಿಯಲ್ಲಿದ್ದೀರೆಂದು ನೀವು ಭಾವಿಸುತ್ತೀರಿ. ವಾಸ್ತವವಾಗಿ ನಿಮ್ಮ ದೇಹವು ಬಸ್‌ನೊಂದಿಗೆ ಚಲಿಸುತ್ತಿರುತ್ತದೆ. ಚಾಲಕ ಬಸ್‌ಗೆ ಬ್ರೇಕ್ ಹಾಕಿ ನಿಲ್ಲಿಸುತ್ತಾನೆ. ನೀವು ಮುಂದಕ್ಕೆ ಬೀಳುತ್ತೀರಿ.
‘ವಸ್ತುವಿನ ವೇಗೋತ್ಕರ್ಷವು (ವೇಗದಲ್ಲಿ ಬದಲಾವಣೆ) ಹೊರಗಿನ ಬಲಕ್ಕೆ ಅನುಗುಣವಾಗಿ ಮತ್ತು ತನ್ನ ದ್ರವ್ಯತೆಗೆ ವಿಗುಣವಾಗಿ ಇರುತ್ತದೆ’
ಉದಾಹರಣೆ: ತುಂಬಿರುವ ಶಾಪಿಂಗ್ ಕಾರ್ಟಗಿಂತಲೂ ಖಾಲಿ ಇರುವ ಶಾಪಿಂಗ್ ಕಾರ್ಟ್ ಅನ್ನು ತಳ್ಳುವುದು ಸುಲಭ. ಏಕೆಂದರೆ ತುಂಬಿರುವ ಶಾಪಿಂಗ್ ಕಾರ್ಟ್ ಹೆಚ್ಚು ದ್ರವ್ಯರಾಶಿಯನ್ನು ಹೊಂದಿರುತ್ತದೆ
‘ಪ್ರತಿಯಾಂದು ಕ್ರಿಯೆಗೂ ಒಂದು ಸಮ ಮತ್ತು ವಿರುದ್ಧ ಪ್ರತಿಕ್ರಿಯೆ ಇರುತ್ತದೆ ’
ಉದಾಹರಣೆ: ರಾಕೆಟ್ ಹೇಗೆ ಮೇಲಕ್ಕೆ ಚಲಿಸುತ್ತದೆ ಎಂದು ತಿಳಿದುಕೊಂಡಾಗ ಇದು ಸುಲಭವಾಗಿ ಅರ್ಥ ಆಗುತ್ತದೆ.
ರಾಕೆಟ್ ಸಾಮಾನ್ಯವಾಗಿ ಪರೋಕ್ಷವಾಗಿ ಭೂಮಿಯನ್ನು ತಳ್ಳಲು ಒತ್ತಡದ ಬಲವನ್ನು ಸೃಷ್ಟಿಸುತ್ತದೆ. ಆದರೆ ಅದು ಬಲಕ್ಕೆ ವಿರುದ್ಧವಾಗಿ ರಾಕೆಟ್ ಅನ್ನು ಮೇಲಕ್ಕೆ ತಳ್ಳಲು ಪ್ರಾರಂಭಿಸುತ್ತದೆ