Smarisu Manave Smarisu Smrana Pitana Mundige

ಸ್ಮರಿಸು ಮನವೇ ಸ್ಮರಿಸು ಸ್ಮರನ ಪಿತನ | Smarisu Manave Smarisu Smarana Pitana Mundige |Kannada English| Prasanna Venkata Dasaru

Smarisu Manave Smarisu Smarana Pitana Mundige In Kannada

ಮುಂಡಿಗೆ ರಚನೆ: ಶ್ರೀ. ಪ್ರಸನ್ನ ವೆಂಕಟ ದಾಸರು

ಸ್ಮರಿಸು ಮನವೇ ಸ್ಮರಿಸು ಸ್ಮರನ ಪಿತನ
ದುರಿತ ಭವಭಯಸಮೂಹದೂರ ರಮಾವರನ ।।ಪ ।।

ಒಬ್ಬ ಬಾಲನಯ್ಯನ ಒದೆದ
ಒಬ್ಬ ಬಾಲಗಟಿವಿಲೊಲಿದ
ಒಬ್ಬ ಬಾಲನ ಅಪ್ಪಿ ರಾಜ್ಯವ ಒಬ್ಬಬಾಲಗಿತ್ತು
ಒಬ್ಬ ಬಾಲೆಯುಂಗಟದಿ ಪೆತ್ತ
ಒಬ್ಬ ಬಾಲೆಯುಂಗಟದಿ ಪೊತ್ತ
ಒಬ್ಬ ಬಾಲೆಗಕ್ಷ್ಯಯ್ಯೆಂದು ಕುಕ್ಷಿಗೊಬ್ಬ ಬಾಲಪನ ।।೧।।

ಇಬ್ಬರ ಮೂರುಸಾರೆಲಳಿದ
ಇಬ್ಬರಿಹ ಭೂಜವ ಮುರಿದ
ಇಬ್ಬರೊಗ್ಗೂಡಿ ಬೆಳೆದು ಹನ್ನಿಬ್ಬರ ಬಡಿದ
ಇಬ್ಬರ ಕಾರಾಗಾರ ತಗಿದ
ಇಬ್ಬರುಪ್ಪು ಬೇಡಲಿ ಸದೆದ
ಇಬ್ಬರಿಂದೈದಿ ಹೋಳಮಯ್ಯನ ನಿಬ್ಬರಿಸಿದನ ।।೨।।

ಮೂರು ಮನೆಯೊಳಗಿಹನ
ಮೂರು ಮಾತಿಗೆ ಹೊಂದದವನ
ಮೂರು ಮೈಯನ ಕೃತ ಸೇವೆಗೆ ಮೂರು ರೂಪಾದನ
ಮೂರು ಪೊಳಲ ಹಗೆಕಾರನ
ಮುರುವೆಂಬನುರುಹಿದನ
ಮೂರಾಂತಕ ಪ್ರಸನ್ನವೆಂಕಟ ಮೂರು ಲೊಕೇಶನ ।।೩।।

ಸ್ಮರಿಸು ಮನವೇ ಸ್ಮರಿಸು ಸ್ಮರನ ಪಿತನ
ದುರಿತ ಭವಭಯಸಮೂಹದೂರ ರಮಾವರನ ।।ಪ ।।

Download Smarisu Manave Smarisu Smarana Pitana Mundige In Kannada and English

Smarisu Manave Smarisu Smarana Pitana Mundige In English

Mundige Composed By: Shri Prasanna Venkata Dasaru

Smarisu manavē smarisu smarana pitana

durita bhavabhayasamūhadūra rāmāvarana ।।pa।।

obba bālanayyana odeda

obba bālagaṭivilolida

obba bālana appi rājyava obbabālagittu

obba bāleyuṅgaṭadi petta

obba bāleyuṅgaṭadi potta

obba bālegakṣyayyendu kukṣigobba bālapana ।।1।।

ibbara mūrusārelaḷida

ibbariha bhūjava murida

ibbaroggūḍi beḷedu hannibbara baḍida

ibbara kārāgāra tagida

ibbaruppu bēḍali sadeda

ibbarindaidi hōḷamayyana nibbarisidana ।।2।।

mūru maneyoḷagihana

mūru mātige hondadavana

mūru maiyana kr̥ta sēvege mūru rūpādana

mūru poḷala hagekārana

muruvembanuruhidana

mūrāntaka prasannaveṅkaṭa mūru lokēśana ।।3।।

smarisu manavē smarisu smarana pitana

durita bhavabhayasamūhadūra rāmāvarana ।।pa।।

1 thought on “ಸ್ಮರಿಸು ಮನವೇ ಸ್ಮರಿಸು ಸ್ಮರನ ಪಿತನ | Smarisu Manave Smarisu Smarana Pitana Mundige |Kannada English| Prasanna Venkata Dasaru”

  1. Pingback: ಎಂಥಾ ಶ್ರೀಮಂತಾನಂತನೋ | Entha Shrimantano Lyrics | Prasannavenkatadasa - Holagi ಎಂಥಾ ಶ್ರೀಮಂತಾನಂತನೋ | Entha Shrimantano Lyrics | Prasannavenkatadasa

Leave a Comment

Your email address will not be published. Required fields are marked *