EnthaShrimanta lyrics

ಎಂಥಾ ಶ್ರೀಮಂತಾನಂತನೋ | Entha Shrimantano Lyrics | Prasannavenkatadasa

ರಚನೆ : ಶ್ರೀ ಪ್ರಸನ್ನವೆಂಕಟದಾಸರು

ಶ್ರೀ ಪ್ರಸನ್ನವೆಂಕಟದಾಸರು ರಚಿಸಿದ ‘ಸ್ಮರಿಸು ಮನವೇ ಸ್ಮರಿಸು’ ಹಾಡಿನ ಲಿರಿಕ್ಸ್ ನೋಡಿರಿ

Entha Shrimantano Song Lyrics In Kannada

ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ
ಎಂಥಾ ಶ್ರೀಮಂತಾನಂತನೋ ||ಪ||

ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿಮೊಮ್ಮಗಶಣ್ಮಶಿರಮ್ಮ
ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ ||

ಅಂಬರುಹಂಗಳ ಅಂಗನಂತಗತ ಮಂಗಳಪಾಂಗ ವಿಶ್ವಂಗಳ ಮಂಗಳ
ಸಿಂಗರದಂಗುಟ ಸಂಗದ ಗಂಗಜ ಕಂಗಳಘಂಗಳ ಹಿಂಗಿಪಳಾಂಗಾ ||

ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ
ಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ ||

ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ
ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ ||

ಅಂಬರದುಂಬಿಗೆ ತುಂಬೆವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬಕೃಪಾಂಬುಧಿ
ಇಂಬಕದಂಬಕಬಿಂಬ ಪ್ರಸನ್ವೇಂಕಟನಂಬಿದ ಬಿಂಬನಿವನೆಂಬ ಕುಟುಂಬಿ ||

Leave a Comment

Your email address will not be published. Required fields are marked *