Bare Gopamma

Bare Gopamma Ninna Balayyanalutane Song Lyrics | Meaning|Kannada | English |ಬಾರೇ ಗೋಪಮ್ಮ ನಿನ್ನ ಬಾಲಯ್ಯನಳುತಾನೆ ಲಿರಿಕ್ಸ್ | Purandara Dasaru

ರಚನೆ : ಶ್ರೀ ಪುರಂದರದಾಸರು

Bare Gopamma Ninna Balayyanalutane Song Meaning In Kannada

‘ಬಾರೇ ಗೋಪಮ್ಮ ನಿನ್ನ ಬಾಲಯ್ಯನಳುತಾನೆ’ ಹಾಡಿನ ಅರ್ಥ:

ಶ್ರೀ ಪುರಂದರದಾಸರು ‘ಬಾರೇ ಗೋಪಮ್ಮ ನಿನ್ನ ಬಾಲಯ್ಯನಳುತಾನೆ’ ಹಾಡಿನಲ್ಲಿ ಬಾಲಕೃಷ್ಣನ ಆಟ, ತುಂಟತನದ ಬಗ್ಗೆ ಹೇಳ್ತಾ , ಭಗವಂತನ ದಶಾವತಾರದ ಕಥೆಯನ್ನೇ ಹೇಳಿದ್ದಾರೆ.

ಮೊದಲ ನುಡಿ, ‘ನೀರೋಳಗಾಡಿ ಮೈ ಒರಸೆಂದು ಅಳುತಾನೆ’ ಯಲ್ಲಿ ಪರಮಾತ್ಮನ ಮತ್ಸ್ಯಾವತಾರದ ಬಗ್ಗೆ ಹೇಳಿದ್ದಾರೆ. ನೀರೊಳಗಿದ್ದರೂ ಮೈಯನ್ನು ಒರಸು ಎಂದು ಕೃಷ್ಣ ಹೇಳುತ್ತಾನೆ !

ಇದೇ ಮೊದಲ ನುಡಿಯಲ್ಲಿ, ‘ಮೇರುವ ಹೊತ್ತು ಮೈ ಭಾರವೆಂದ ಅಳುತಾನೆ’ ಎಂದು ಹೇಳುತ್ತಾ, ಕೂರ್ಮಾವತಾರವನ್ನು ಹೇಳುತ್ತಾರೆ.
ಬ್ರಹತ್ ಮೇರು ಪರ್ವತವನ್ನೇ ತನ್ನ ಬೆನ್ನ ಮೇಲೆ ಹೊತ್ತು ನಿಂತಿರುವ ಕೂರ್ಮಾವತಾರದ ದೇವರು, ತನ್ನ ಮೈನೇ ಭಾರವಾಗಿದೆ ಏನು ಅಳುತ್ತಾನಂತೆ !

‘ಧರೆಯ ನೆಗಹಿ ತನ್ನ ದವಡೆ ನೊಂದಳುತಾನೆ’ ನುಡಿಯಲ್ಲಿ ವರಾಹವತಾರ ಹೇಳುತ್ತಾರೆ. ಹಿರಣ್ಯಾಕ್ಷನಿಂದ ಭೂಮಿಯನ್ನು ರಕ್ಷಿಸಿದ ಭಗವಂತ, ಹಲ್ಲು ನೋವು ಆಗುತ್ತದೆ ಎಂದು ಹೇಳುತ್ತಾನಂತೆ !!

‘ದುರುಳ ರಕ್ಕಸನ ಕರುಳ ಕಂಡಳುತಾನೆ’ ಎಂದು ಹೇಳುತ್ತಾ, ನರಸಿಂಹ ಅವತಾರಿ ಭಗವಂತ ಹಿರಣ್ಯಕಶ್ಯಪು ವಧೆಯ ಹೇಳುತ್ತಾರೆ. ಆಗ ಕೊಯ್ದ ಆ ರಾಕ್ಷಸನ ಕರುಳನ್ನು ನೋಡಿ ಭಯ ಆಗುತ್ತಿದೆ ಎಂದು ಅಳುತ್ತಾನಂತೆ !!

‘ನೆಲನನಳೆದು ಪುಟ್ಟ ಚರಣನೊಂದಳುತಾನೆ’ ಎಂದು ಹೇಳುವಾಗ ವಾಮನ ಅವತಾರದ ಕಥೆ ಹೇಳುತ್ತಾರೆ. ಮೂರು ಹೆಜ್ಜೆಯನು ಅಳೆದು ಮೂರನೇಯ ಹೆಜ್ಜೆಯನ್ನು ಬಲಿಯ ತಲೆಯ ಮೇಲಿಡುತ್ತಾನೆ. ಹಾಗೆ ಮಾಡಿದ್ದಕ್ಕೆ ಕಾಲು ನೋಯುತ್ತಿದೆ ಎಂದು ಕೃಷ್ಣ ಅಳುತ್ತಾನಂತೆ !

ಪರಶುರಾಮ ಅವತಾರದಲ್ಲಿ ಛಲದಿಂದ ಭೂಮಿಯ ಮೇಲಿರುವ ಕ್ಷತ್ರಿಯರನ್ನೆಲ್ಲ ಸಂಹಾರ ಮಾಡಿದ್ದ. ಈಗ ಮತ್ತೆ ಕೊಡಲಿಯ ಕೊಡು ಎಂದು ಕೃಷ್ಣ ಅಳ್ಳುತ್ತಾನಂತೆ. ಇದನ್ನು ‘ಛಲದಿಂದ ಕೊಡಲಿಯ ಪಿಡುವೆನೆಂದಳುತಾನೆ’ ಏಂದು ಪುರಂದರದಾಸರು ಹೇಳಿದ್ದಾರೆ.

ರಾಮಾವತಾರದಲ್ಲಿ ರಾಮದೇವರು ಕಪಿ ಸೈನ್ಯದ ಜೊತೆ ಲಂಕೆಗೆ ಹೋಗುತ್ತಾನೆ. ರಾವಣನ ಸಂಹಾರ ಮಾಡುತ್ತಾನೆ. ಸೀತಾ ದೇವಿಯನ್ನು ಕರೆತರುತ್ತಾನೆ. ಇದೇ ಅವತಾರದಲ್ಲಿಯ ಕಪಿಗಳನ್ನು ನೋಡಿ ಬಾಲ ಕೃಷ್ಣ ಅಳುತ್ತಾನೆ ಎಂದು ‘ಬಲು ಕಪಿಗಳಕಂಡು ಅಂಜಿಕೊಂಡಳುತಾನೆ’ ಎನ್ನುವ ಸಾಲಿನಲ್ಲಿ ಪುರಂದರದಾಸರು ಹೇಳುತ್ತಾರೆ..

‘ನೆಲುವಿನ ಬೆಣ್ಣಿ ಕೈ ನಿಲುಕದೆಂದೆಳುತಾನೆ’ ಎನ್ನುವ ಸಾಲಿನಲ್ಲಿ ಇದೆ ಕೃಷ್ಣಾವತಾರದ ಬೆಣ್ಣೆ ತಿನ್ನುವ ಕಥೆ ಹೇಳುತ್ತಾರೆ ದಾಸರು. ಬೆಣ್ಣೆ ಕೈಗೆ ಸಿಗದು ಮೇಲಕ್ಕೆ ಇದೆ ಏನು ಬಾಲ ಕೃಷ್ಣ ಅಳುತ್ತಾನಂತೆ !

‘ಬಟ್ಟಬತ್ತಲೆನಿಂತು’ ಏನು ಹೇಳುವ ಮೂಲಕ ಬುದ್ಧನ ಬಗ್ಗೆ ದಾಸರು ಹೇಳುತ್ತಾರೆ. ಬುದ್ಧಾವತಾರದಲ್ಲಿ ಭಗವಂತ ಎಲ್ಲ ಐಶ್ವರ್ಯ ಬಿಟ್ಟು ಕಾಡಿಗೆ ಹೋಗುತ್ತಾನೆ. ಅದನ್ನೇ ಬಾಲ ಕೃಷ್ಣ ಬೆತ್ತಲು ನಿಂತು ಎತ್ತಿಕೋ ಎಂದು ಅಳುತ್ತಾನಂತೆ !

ಇನ್ನು ಕಲ್ಕಿ ಅವತಾರದಲ್ಲಿ ಭಗವಂತ ಕುದುರನ್ನೇರಿ ಬರುತ್ತಾನೆ. ಅದಕ್ಕೆ ಬಾಲ ಕೃಷ್ಣ ಕುದುರೆಯ ಮೇಲೆ ಕೂಡಿಸು ಏನು ಅಳುತ್ತಾನೆ ಎಂದು ‘ಶ್ರೇಷ್ಠ ತೇಜಿಯನು ಹತ್ತಿಸೆಂದು ಅಳುತಾನೆ’ ಸಾಲಿನಲ್ಲಿ ಹೇಳುತ್ತಾರೆ ಪುರಂದರ ದಾಸರು.

ಇಲ್ಲಿ ಪುರಂದರ ದಾಸರು ಹಾಸ್ಯಮಯವಾಗಿ ಕೃಷ್ಣ ತನ್ನ ಎಲ್ಲ ಹತ್ತು ಅವತಾರಗಳನ್ನು ನೆನಪಿಸಿಕೊಳ್ಳುತ್ತಾನೆ ಎಂದು ಹೇಳುತ್ತಾರೆ.
ಮೇಲ್ನೋಟಕ್ಕೆ ಕೃಷ್ಣ ಮಲಗುತ್ತಿಲ್ಲ ಎತ್ತಿಕೋ ಎಂದು ಗೋಪಿಕೆಯರು ಯಶೋದೆಗೆ ಹೇಳುತ್ತಿರುವಂತೆ ಭಾಸವಾಗುತ್ತದೆ.

Bare Gopamma Ninna Balayyanalutane Song Lyrics In Kannada

ಬಾರೇ ಗೋಪಮ್ಮ ನಿನ್ನ ಬಾಲಯ್ಯನಳುತಾನೆ, ಬಾರೇ ಗೋಪಮ್ಮ ||ಪ||
ಆರು ತೂಗಿದರು ಮಲಗನು ಮುರವೈರಿ, ಬಾರೇ ಗೋಪಮ್ಮ ||ಅ||

ಬಾರೇ ಗೋಪಮ್ಮ ನಿನ್ನ ಬಾಲಯ್ಯನಳುತಾನೆ, ಬಾರೇ ಗೋಪಮ್ಮ ||ಪ||
ಆರು ತೂಗಿದರು ಮಲಗನು ಮುರವೈರಿ, ಬಾರೇ ಗೋಪಮ್ಮ ||ಅ||

ನೀರೋಳಗಾಡಿ ಮೈ ಒರಸೆಂದು ಅಳುತಾನೆ, ಬಾರೇ ಗೋಪಮ್ಮ
ಮೇರುವ ಹೊತ್ತು ಮೈ ಭಾರವೆಂದ ಅಳುತಾನೆ , ಬಾರೇ ಗೋಪಮ್ಮ ||1||

ಧರೆಯ ನೆಗಹಿ ತನ್ನ ದವಡೆ ನೊಂದಳುತಾನೆ, ಬಾರೇ ಗೋಪಮ್ಮ
ದುರುಳ ರಕ್ಕಸನ ಕರುಳ ಕಂಡಳುತಾನೆ, ಬಾರೇ ಗೋಪಮ್ಮ ||2||

ಬಾರೇ ಗೋಪಮ್ಮ ನಿನ್ನ ಬಾಲಯ್ಯನಳುತಾನೆ, ಬಾರೇ ಗೋಪಮ್ಮ ||ಪ||
ಆರು ತೂಗಿದರು ಮಲಗನು ಮುರವೈರಿ, ಬಾರೇ ಗೋಪಮ್ಮ ||ಅ||

ನೆಲನನಳೆದು ಪುಟ್ಟ ಚರಣನೊಂದಳುತಾನೆ, ಬಾರೇ ಗೋಪಮ್ಮ
ಛಲದಿಂದ ಕೊಡಲಿಯ ಪಿಡುವೆನೆಂದಳುತಾನೆ ,ಬಾರೇ ಗೋಪಮ್ಮ ||3||

ಬಲು ಕಪಿಗಳಕಂಡು ಅಂಜಿಕೊಂಡಳುತಾನೆ , ಬಾರೇ ಗೋಪಮ್ಮ
ನೆಲುವಿನ ಬೆಣ್ಣಿ ಕೈ ನಿಲುಕದೆಂದೆಳುತಾನೆ, ಬಾರೇ ಗೋಪಮ್ಮ ||4||

ಬಾರೇ ಗೋಪಮ್ಮ ನಿನ್ನ ಬಾಲಯ್ಯನಳುತಾನೆ, ಬಾರೇ ಗೋಪಮ್ಮ ||ಪ||
ಆರು ತೂಗಿದರು ಮಲಗನು ಮುರವೈರಿ, ಬಾರೇ ಗೋಪಮ್ಮ ||ಅ||

ಬಟ್ಟಬತ್ತಲೆನಿಂತು ಎತ್ತಿಕೊಳ್ಳೆನುತಾನೆ, ಬಾರೇ ಗೋಪಮ್ಮ
ಶ್ರೇಷ್ಠ ತೇಜಿಯನು ಹತ್ತಿಸೆಂದು ಅಳುತಾನೆ ,ಬಾರೇ  ಗೋಪಮ್ಮ ||5||

ತೊಟ್ಟಿಲೊಳಗೆ ಮಲಗಲೊಲ್ಲನು ಮುರವೈರಿ, ಬಾರೇ ಗೋಪಮ್ಮ
ಸೃಷ್ಟಿಯೊಳು ಪುರಂದರವಿಠಲ ಕರೆಯುತ್ತಾನೆ , ಬಾರೇ ಗೋಪಮ್ಮ ||6||

ಬಾರೇ ಗೋಪಮ್ಮ ನಿನ್ನ ಬಾಲಯ್ಯನಳುತಾನೆ, ಬಾರೇ ಗೋಪಮ್ಮ ||ಪ||
ಆರು ತೂಗಿದರು ಮಲಗನು ಮುರವೈರಿ, ಬಾರೇ ಗೋಪಮ್ಮ ||ಅ||

ಬಾರೇ ಗೋಪಮ್ಮ ನಿನ್ನ ಬಾಲಯ್ಯನಳುತಾನೆ, ಬಾರೇ ಗೋಪಮ್ಮ ||ಪ||
ಆರು ತೂಗಿದರು ಮಲಗನು ಮುರವೈರಿ, ಬಾರೇ ಗೋಪಮ್ಮ ||ಅ||

Bare Gopamma Ninna Balayyanalutane Song Meaning In English

Meaning of song ‘Bare Gopamma’ in English:

Sri Purandaradas, in his song ‘Bare Gopamma ninna Balayyanalutane ‘, tells the story of Balakrishna’s play and naughtiness and the story of Lord’s Dashavatara.

The first mention is of the Lord’s Matsvataravara in ‘ Nirolagadi mai orasendu alutane ‘. Krishna tells to wipe him, as he is wet while playing in water!

In the same first stanza, he says, ‘ meruva hottu mai bharavenda alutane ‘, Shri Purandaradasa mentions Koormavatara. In Kurmavatara, the god holds mighty Meru montian on his back. Not, Kirhsna is telling his body is paining because of weight.

In Varahavatara ,Lord saved the earth from Hiranyaksha through his teeth. Now he is crying that his jaw is clenching !. This is mentioned in the stanza ‘ dhareya negahi tanna davade nondalutane ‘.

Narasimha Avatari Lord killed demon Hiranyakashyapu. In ‘ durula rakkasana karula kandalutane ‘ stanza Purandaradasa mentions that by looking at the guts of the harvested monster Krishna crying out in fear !!

The story of the incarnation of Vamana is said when he says, ‘ nelananaledu putta caranano’ He measures three steps and puts the third step on the Bali’s head. Now Krishna is crying that his leg is hurting!

In the avatar of Parashurama, he killed all the Kshatriyas on earth. Now, again, Krishna is asking to give in axe.. Purandaradas said that this in ‘ chaladinda kodaliya piduvenendalutane ‘.

In Ramavatara, lord Rama goes to Lanka with the Kapi army. Kills Ravana. And brings bacl Sita Devi. Purandaradasa says in the line ‘Balu Kapilalakandu Anjikadakatane’ that Bala Krishna cries that he is scared of monkeys !

The story of eating the butter of Krishnavatara is narrated in the line of ‘ neluvina benni kai nilukadendelutane ‘. Bala Krishna crying now because he is not able to grab the butter hung on top of the house!

Dasaru says about the Buddha by saying what is ‘ battabattalenintu ettikollenutane ‘. In the Buddhavatara, the Lord leaves all Aishwarya and goes to the forest. That’s why Bala Krishna is standing naked and crying!

In the Kalki incarnation, the Lord comes in the horse. In the line ‘ shrstiyolu tejiyanu hattisendu alutane’. Now Krishna cries demanding to ride horse by sitting on the horseback’, says Purandara Dasa.

Here Purandara Dasa jokingly says that Krishna remembers all ten incarnations.
It feels like the Gopikas are telling Yashoda that Krishna is not sleeping. But stories of all 10 avataras (incarnation) of god is narrated in the song ‘Bare Gopamma’.

Bare Gopamma Ninna Balayyanalutane Song Lyrics In English

Bare Gopamma ninna balayyanalutane, bare Gopamma ||Pa||
Aru tugidaru malaganu muravairi, bare Gopamma ||A||

Bare Gopamma ninna balayyanalutane, bare Gopamma ||Pa||
Aru tugidaru malaganu muravairi, bare Gopamma ||A||

Nirolagadi mai orasendu alutane, bare Gopamma
meruva hottu mai bharavenda alutane, bare Gopamma ||1||

dhareya negahi tanna davade nondalutane, bare Gopamma
durula rakkasana karula kandalutane, bare Gopamma ||2||

bare Gopamma ninna balayyanalutane, bare Gopamma ||Pa||
Aru tugidaru malaganu muravairi, bare Gopamma ||A||

nelananaledu putta carananondalutane, bare Gopamma
chaladinda kodaliya piduvenendalutane,bare Gopamma ||3||

balu kapigalakandu anjikondalutane, bare Gopamma
neluvina benni kai nilukadendelutane, bare Gopamma ||4||

Bare Gopamma ninna balayyanalutane, bare Gopamma ||Pa||
Aru tugidaru malaganu muravairi, bare Gopamma ||A||

battabattalenintu ettikollenutane, bare Gopamma
shrstiyolu tejiyanu hattisendu alutane,bare Gopamma ||5||

tottilolage malagalollanu muravairi, bare Gopamma
shrstiyolu purandaraviṭhala kareyuttane, bare Gopamma ||6||

Bare Gopamma ninna balayyanalutane, bare Gopamma ||Pa||
Aru tugidaru malaganu muravairi, bare Gopamma ||A||

Bare Gopamma ninna balayyanalutane, bare Gopamma ||Pa||
Aru tugidaru malaganu muravairi, bare Gopamma ||A||

Bare Gopamma Song by Shri Raichuru Sheshagiridasa

Leave a Comment

Your email address will not be published. Required fields are marked *