ಕೃಪೆ :ಸಾಹಿತ್ಯ : ಪ್ರಮೋದ ಮರವಂತೆ
ಸಂಗೀತ : ವಾಸುಕಿ ವೈಭವ
ಗಾಯನ :ವಾಸುಕಿ ವೈಭವ
ಆಡಿಯೋ ಹಕ್ಕು : A2 ಮ್ಯೂಸಿಕ್
ನಿಷ್ಕಲ್ಮಶ ಪ್ರೇಮ ಕವಿತೆ
ಕಣ್ಣು ಕಣ್ಣು ಕಾದಾಡುತ ಇರಲಿ
ಬಾಕಿ ಮಾತು ಉಸಿರೆ ಆಡಲಿ
ಕಣ್ಣು ಕಣ್ಣು ಕಾದಾಡುತ ಇರಲಿ
ಬಾಕಿ ಕನಸು ಎದುರೆ ಬೀಳಲಿ
ಬಂದಿರುವ ಹೆಜ್ಜೆಗಳ
ಬಚ್ಚಿಡು ಮರೆಯಲಿ
ಹಿಂದಿರುಗಿ ಹೊರಡಲು
ಮರೆತೆ ಹೋಗಲಿ
ಸನಿಹವೆ ಸಾಗುವ
ಸಿಹಿ ಸಿಹಿ ಯೋಗವ
ಉಳಿಸು ಹೀಗೆ…..
ಮರೆಯಾಗಿ ಇರುವ
ನೆನೆದಾಗ ಬರುವ
ನಯವಾದ ನಸುಕು ನೀನೆನೆ
ತುದಿಗಾಲು ಬರೆವ
ನೂರಾರು ಕಥೆಯ
ನವಿರಾದ ಪುಟವು ನಿಂದೇನೆ….
ದಿನವು ನಿನದೆ ಸಿಹಿ ವಾರ್ತೆ ತರುವ ಗಾಳಿ
ಎದೆಯ ಸವರಿ ಉಸಿರೆ ಆಗಲಿ…………
ಅರಿಯದ ಮೌನವ
ಅಳೆಯುವ ಧ್ಯಾನವ
ಕಲಿಸು….ನೀ…ನು…….